ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಸರ್ಕಾರದ ಆದೇಶ ಸಂಖ್ಯೆ ಸಕಇ 09 ಪವಯೋ 2010, ದಿನಾಂಕ: 26/10/2010ರ ಆದೇಶದನ್ವಯ ಜುಲೈ 2011 ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದೆ. ಅಂದಿನಿಂದಲೂ ಬಾಡಿಗೆಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯು ಆಗಸ್ಟ್ 2022ರ ಮಾಹೆ ಯಿಂದ ಸ್ವಂತಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸರ್ಕಾರದ ಆದೇಶ ಸಂಖ್ಯೆ ಸಕಇ 251 ಪವಯೋ 2013 ದಿನಾಂಕ: 19/11/2013ರ ಆದೇಶದನ್ವಯ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ (1958) ನಿಯಮ 8(21)ರಅನ್ವಯ ಇಲಾಖಾ ಮುಖ್ಯಸ್ಥರೆಂದು ಘೋಷಿಸಿ, ಸರ್ಕಾರದ ಪತ್ರ ಸಂಖ್ಯೆ ಸಕಇ 152 ಪವಯೋ 2015 ದಿನಾಂಕ 21/08/2015 ರಲ್ಲಿ ಆರ್ಥಿಕ ಪ್ರತ್ಯಾಯೋಜನೆ ಆದೇಶ ಸಂಖ್ಯೆ ಆಇ 02 ಟಿಎಫ್‍ಪಿ 2010, ದಿನಾಂಕ: 30/04/2010ರಲ್ಲಿ ಇಲಾಖಾ ಮುಖ್ಯಸ್ಥರಿಗೆ ನೀಡಿರುವ ಅಧಿಕಾರವನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಚಲಾಯಿಸಲು ಅನುಮತಿ ನೀಡಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ ಸಕಇ 09 ಪವಯೋ 2010, ದಿನಾಂಕ: 26/10/2010 ಮತ್ತು ಸಕಇ 177 ಪವಯೋ 2013 ದಿನಾಂಕ: 12/12/2013ರ ಆದೇಶಗಳಂತೆ ಎರಡು ಹಂತಗಳಲ್ಲಿ ವಿವಿಧ ದರ್ಜೆಯ ಒಟ್ಟು 27 ಹುದ್ದೆಗಳನ್ನು ಕರ್ನಾಟಕರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಸರ್ಕಾರ ಮಂಜೂರು ಮಾಡಿರುತ್ತದೆ. ಈ 27 ಖಾಯಂ ಹುದ್ದೆಗಳ ನೇಮಕಾತಿ/ಮುಂಬಡ್ತಿ ಪ್ರಕ್ರಿಯೆಗಳನ್ನು ಕೈಗೊಳ್ಳಲು ಕರ್ನಾಟಕರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ದರ್ಜೆ ಮತ್ತು ನೇಮಕಾತಿ) ನಿಯಮ-2019ನ್ನು ಸರ್ಕಾರದ ಪ್ರಕಟಣೆ ಸಂಖ್ಯೆ ಎಸ್ ಡಬ್ಲೂ ಡಿ 213 ಪವಯೋ 2011 ದಿನಾಂಕ: 23/03/2019 ರಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಹೊರಡಿಸಿದ್ದು ದಿನಾಂಕ: 18/04/2019 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯದ ಮೂಲ ನಿವಾಸಿ ಬುಡಕಟ್ಟು ಸಮುದಾಯಗಳಾದ ಕೊರಗ ಮತ್ತು ಜೇನುಕುರುಬ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಹಾಗೂ ಆ ಸಮುದಾಯಗಳ ಕಲೆ, ಸಂಸ್ಕೃತಿ, ಭಾಷೆ ಮತ್ತು ಇತರೆ ವಿಷಯಗಳ ಬಗ್ಗೆ ಅಧ್ಯಯನ ಮಾಡಿ ಇವುಗಳನ್ನು ಉಳಿಸಿ-ಬೆಳೆಸಲು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಡಿಯಲ್ಲಿ ಮೂಲ ಆದಿವಾಸಿ ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಧ್ಯೇಯೋದ್ದೇಶಗಳನ್ವಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರತಿ ವರ್ಷಕೇಂದ್ರ ಮತ್ತುರಾಜ್ಯ ಸರ್ಕಾರ ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆ.