1. ಸಂಶೋಧನೆ
ಕರ್ನಾಟಕ ರಾಜ್ಯದಲ್ಲಿನ ಪರಿಶಿಷ್ಟ ಪಂಗಡ/ಬುಡಕಟ್ಟು ಸಮುದಾಯಗಳ ಆಚಾರ-ವಿಚಾರ, ಸಂಸ್ಕøತಿ, ಜೀವನಶೈಲಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಹಾಗೂ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ವಿವಿಧ ಸಂಶೋಧನಾ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ.
2. ಮೌಲ್ಯಮಾಪನ
ಪರಿಶಿಷ್ಟ ಪಂಗಡದವರಿಗಾಗಿ ಸರ್ಕಾರ ರೂಪಿಸಿರುವ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಬುಡಕಟ್ಟು ಸಮುದಾಯದವರಿಗೆ ಪರಿಣಾಮಕಾರಿಯಾಗಿ ಯೋಜನೆಗಳು ತಲುಪುತ್ತಿರುವ ಕುರಿತು ಹಾಗೂ ಸದರಿ ಯೋಜನೆಗಳ ಅನುಷ್ಠಾನದಿಂದ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಉಂಟಾಗಿರುವ ಬದಲಾವಣೆ ಬಗ್ಗೆ ಮೌಲ್ಯಮಾಪನ ಅಧ್ಯಯನ ಕೈಗೊಳ್ಳಲಾಗುತ್ತಿದೆ.
3. ಕುಲಶಾಸ್ತ್ರೀಯ ಅಧ್ಯಯನ
ಸರ್ಕಾರ ಕಾಲಕಾಲಕ್ಕೆ ನೀಡುವ ಆದೇಶದ ಮೇರೆಗೆ ರಾಜ್ಯದಲ್ಲಿನ ವಿವಿಧ ಜಾತಿ/ಸಮುದಾಯಗಳನ್ನು ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಸದರಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳಲಾಗುತ್ತಿದೆ.
4.ಬುಡಕಟ್ಟು ಭಾಷೆಗಳಲ್ಲಿ ನಿಘಂಟು ರಚನೆ
ಬುಡಕಟ್ಟು ಸಮುದಾಯದವರ ಭಾಷೆಯನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸುವ ಮತ್ತು ನಾಗರಿಕ ಸಮಾಜಕ್ಕೆ ಬುಡಕಟ್ಟು ಭಾಷೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬುಡಕಟ್ಟು ಸಮುದಾಯಗಳ ಭಾಷೆಗಳಲ್ಲಿ ನಿಘಂಟು (Dictionary)
5.ಬುಡಕಟ್ಟು ಭಾಷೆಗಳಲ್ಲಿ ಪ್ರಾಥಮಿಕೆಗಳ ರಚನೆ
ಬುಡಕಟ್ಟು ಸಮುದಾಯಗಳ ಮಕ್ಕಳಲ್ಲಿ ಸಾಕ್ಷರತೆ ಹಾಗೂ ಅವರ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದರ ಜೊತೆಗೆ ಶಾಲೆಯ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತಮೀಕರಿಸುವ ಸಲುವಾಗಿ ಬುಡಕಟ್ಟು ಭಾಷೆಗಳಲ್ಲಿ ಪ್ರಾಥಮಿಕೆ (Primers) ಗಳನ್ನು ರಚಿಸುವುದು.
6. ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ
ಬುಡಕಟ್ಟು ಸಮುದಾಯದ ನಿರುದ್ಯೋಗಿ ಯುವಕ/ಯುವತಿಯರಿಗೆ ಕೌಶಲ್ಯಾಧಾರಿತ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ವೃತ್ತಿ ತರಬೇತಿ, ಹಾಗೂ ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರವನ್ನು ಪಡೆಯುವಾಗ ಮತ್ತು ನೀಡುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳ ಕುರಿತು ಬುಡಕಟ್ಟು ಜನ ಪ್ರತಿನಿಧಿಗಳಿಗೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡುವುದು. ಅರಣ್ಯ ಹಕ್ಕು ಕಾಯ್ದೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ/ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಬುಡಕಟ್ಟು ಪ್ರತಿನಿಧಿಗಳಿಗೆ ತರಬೇತಿ ನೀಡುವುದು.ಆಶ್ರಮ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಗಣಿತ, ವಿಜ್ಞಾನ ಮತ್ತು ಆಂಗ್ಲ ಭಾಷೆ ಬೋಧಿಸುವ ಶಿಕ್ಷಕರಿಗೆ ಪುನರ್‍ಮನನ ತರಬೇತಿಗಳನ್ನು ಆಯೋಜಿಸುವುದು.
7. ವಿಚಾರ ಸಂಕಿರಣ/ಕಾರ್ಯಾಗಾರ ಏರ್ಪಡಿಸುವುದು
ಬುಡಕಟ್ಟು ಸಮುದಾಯಗಳ ಸಾಮಾಜಿಕ, ಸಾಂಸ್ಕøತಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಜೀವನೋಪಾಯ ಕ್ರಮಗಳು, ಭಾಷೆ ಮತ್ತು ಸಾಹಿತ್ಯ, ಪರಿಸರ ಜೀವ ವೈವಿದ್ಯತೆ ಹಾಗೂ ಅವರ ಸಮಸ್ಯೆ, ಸವಾಲು ಮತ್ತು ಅಭಿವೃದ್ಧಿ ಕುರಿತಾದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸುವುದು.
8.ಸಾಕ್ಷ್ಯಚಿತ್ರಗಳ ನಿರ್ಮಾಣ
ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ 50 ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯಗಳ ಜೀವನಶೈಲಿ, ಆಚಾರ-ವಿಚಾರ, ಕಲೆ-ಸಂಸ್ಕøತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಯಶಸ್ವಿಯಾಗಿರುವ ಬುಡಕಟ್ಟು ಸಮುದಾಯಗಳ ವ್ಯಕ್ತಿ ಅಥವಾ ಗುಂಪುಗಳ ಯಶೋಗಾಥೆ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡುವುದು.
9. ಆರೋಗ್ಯ ತಪಾಸಣೆ, ಆರೈಕೆ, ಅರಿವು ಶಿಬಿರ ಏರ್ಪಡಿಸುವುದು
ಬುಡಕಟ್ಟು ಸಮುದಾಯಗಳು ವಾಸಿಸುವ ಪ್ರದೇಶಗಳಲ್ಲಿ ನುರಿತ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ಆರೈಕೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು.
10. ಬುಡಕಟ್ಟು ಮ್ಯೂಸಿಯಂ ಸ್ಥಾಪನೆ
ರಾಜ್ಯದಲ್ಲಿ 50 ಬುಡಕಟ್ಟು ಸಮುದಾಯಗಳಿದ್ದು, ಈ ಬುಡಕಟ್ಟು ಸಮುದಾಯದವರು ಉಪಯೋಗಿಸುತ್ತಿದ್ದ ಮತ್ತು ಪ್ರಸ್ತುತ ಉಪಯೋಗಿಸುತ್ತಿರುವ ಪರಿಕರಗಳು/ಸಾಮಗ್ರಿಗಳನ್ನು ಸಂಗ್ರಹಿಸಿ ಅವುಗಳನ್ನು ಸಂರಕ್ಷಿಸಿ ಪ್ರದರ್ಶಿಸುವ ಮೂಲಕ ಬುಡಕಟ್ಟು ಜೀವನ ಪದ್ಧತಿ, ಸಂಸ್ಕøತಿಯನ್ನು ಇತರ ಸಮುದಾಯದವರಿಗೆ ಪರಿಚಯಿಸುತ್ತಿದೆ.
11. ಬುಡಕಟ್ಟು ಉತ್ಸವಗಳನ್ನು ಆಯೋಜಿಸುವುದು
ವಿವಿಧ ಬುಡಕಟ್ಟು ಸಮುದಾಯಗಳ ಕಲೆ, ಸಂಸ್ಕøತಿ ಮತ್ತು ಕಲಾತಂಡಗಳ ಕಲಾಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯ ಮಟ್ಟದ ಬುಡಕಟ್ಟು ಉತ್ಸವಗಳನ್ನು ಆಯೋಜಿಸುವುದು.
12. ಗ್ರಂಥಾಲಯ ಸ್ಥಾಪನೆ ಮತ್ತು ನಿರ್ವಹಣೆ
ಬುಡಕಟ್ಟು ಸಮುದಾಯಗಳ ಸಂಸ್ಕøತಿ, ಕಲೆ, ಜೀವನ ಶೈಲಿ ವಿಷಯಗಳ ಕುರಿತು ವಿವಿಧ ಲೇಖಕರು ಬರೆದಿರುವ ಗ್ರಂಥಗಳನ್ನು ಸಂಗ್ರಹಿಸಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗದ ಸಿಬ್ಬಂದಿ ವರ್ಗದವರಿಗೆ ಮತ್ತು ಸಂಶೋಧಕರಿಗೆ ಹಾಗೂ ಆಸಕ್ತರ ಪರಾಮರ್ಶನೆಗಾಗಿ ಗ್ರಂಥಾಲಯದಲ್ಲಿ ಕಾಯ್ದಿರಿಸುವುದು.
13. ಪ್ರಕಟಣೆಗಳು
ಸಂಸ್ಥೆಯ ಮೂಲಕ ಬುಡಕಟ್ಟು ಸಮುದಾಯಗಳ ವಿವಿಧ ಜೀವನ ಶೈಲಿಯ ಚಿತ್ರಗಳನ್ನು ಒಳಗೊಂಡಂತಹ ವಾರ್ಷಿಕ ಕ್ಯಾಲೆಂಡರುಗಳು, ಬುಡಕಟ್ಟು ಸಮುದಾಯದವರಿಗೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳ ಮಾಹಿತಿ ಒಳಗೊಂಡ ಕೈಪಿಡಿಗಳು, ಅರಣ್ಯ ಹಕ್ಕು ಕಾಯ್ದೆ ಹಾಗೂ ಉದ್ಯೋಗ ಖಾತ್ರಿ ಯೋಜನೆ ಕುರಿತ ಮಾಹಿತಿ ಕೈಪಿಡಿಗಳು, ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಡಿಕೆ ಹಾಳೆಗಳನ್ನು ಮುದ್ರಿಸಿ ಪ್ರಕಟಿಸುವುದು.
14.ಬುಡಕಟ್ಟು ಸಮುದಾಯದವರ ಅಂತರ ರಾಜ್ಯ ಪ್ರವಾಸ
ಹೊರ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಪರಿಶಿಷ್ಟ ಪಂಗಡಗಳ ಪ್ರತಿನಿಧಿಗಳನ್ನು ಒಬ್ಬ ನೋಡಲ್ ಅಧಿಕಾರಿಯೊಂದಿಗೆ ಒಂದು ರಾಜ್ಯಕ್ಕೆ ನಿಗಧಿತ ಅವಧಿಗೆ ನಿಯೋಜಿಸುವುದು.
15.ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ ರಾಜ್ಯದ ಇಬ್ಬರು ಬುಡಕಟ್ಟು ಸಮುದಾಯದ ಪ್ರತಿನಿಧಿಗಳನ್ನು ನವದೆಹಲಿಗೆ ನಿಯೋಜಿಸುವುದು
ಪ್ರತಿ ವರ್ಷ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ವೀಕ್ಷಣೆಗಾಗಿ ರಾಜ್ಯದಿಂದ ಬುಡಕಟ್ಟು ಸಮುದಾಯದ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಸೇರಿದಂತೆ ಇಬ್ಬರು ಪ್ರತಿನಿಧಿಗಳನ್ನು ಒಬ್ಬ ನೋಡಲ್ ಅಧಿಕಾರಿಯೊಂದಿಗೆ ನವದೆಹಲಿಗೆ ನಿಯೋಜಿಸುವುದು.